Monday, March 26, 2012

ನನಗೆ ಇಷ್ಟವಾದ ಚಿತ್ರಾನ್ನ ಮಾಡುವ ವಿಧಾನ


ಚಿತ್ರಾನ್ನ 
ಬೇಕಾಗುವ ಸಾಮಗ್ರಿಗಳು: 
ಅನ್ನ (Rice)

ಎಣ್ಣೆ(Oil)
ಸಾಸಿವೆ(mustard seeds)
ಕರಿ ಬೇವು(Curry leaves)
ಕಡ್ಲೆ ಬೇಳೆ(Bengal Gram)
ಉದ್ದಿನ ಬೇಳೆ(Black Gram)
ಕಡ್ಲೆ ಬೀಜ (Ground Nut)
ಈರುಳ್ಳಿ (Onion)
ಹಸಿ ಮೆಣಸಿನ ಕಾಯಿ(Chillies)
ಟೊಮೇಟೊ(Tomato)
ತೆಂಗಿನ ಕಾಯಿ ತುರಿ (grated Coconut)
ಜೀರಿಗೆ ಮತ್ತು ಮೆಂತ್ಯ ಪುಡಿ (1ಸ್ಪೂನ್) (Jeera and Methi Powder)
ಹುಣಿಸೆ ಹಣ್ಣು (ಸ್ವಲ್ಪ ನೆನೆಸಿಟ್ಟು ಕೊಳ್ಳಬೇಕು) (Tamarind)
ಕೊತ್ತಂಬರಿ (Coriander leaves)
ಉಪ್ಪು (Salt)
ಅರಿಸಿನ ಪುಡಿ  (Turmeric Powder)

ಮಾಡುವ ವಿಧಾನ:
ಬಾಣಲಿಯಲ್ಲಿ ಎಣ್ಣೆ ಹಾಕಿ , ನಂತರ ಸಾಸಿವೆ , ಕರಿಬೇವು ಹಾಕಿ, ಇದಾದ ನಂತರ ಕಡ್ಲೆ ಬೇಳೆ , ಉದ್ದಿನ ಬೇಳೆ, ಕಡ್ಲೆ ಬೀಜ ಹಾಕಿ.ಸ್ವಲ್ಪ ಕೆಂಪಾದ ಮೇಲೆ ಈರುಳ್ಳಿ , ಹಸಿ ಮೆಣಸಿನ ಕಾಯಿ ಹಾಕಿ ಬೇಯಿಸಿ . ನಂತರ ಟೊಮೇಟೊ ಹಾಕಿ ಆಮೇಲೆ ಹುಣಿಸೆ ರಸವನ್ನು ಹಾಕಿ, ಹಾಗೆ ಜೀರಿಗೆ ಮತ್ತು ಮೆಂತ್ಯ ಪುಡಿಯ ಮಿಶ್ರಣ ಹಾಕಿ, ಉಪ್ಪು ,ಹರಿಸಿನ ಪುಡಿಯನ್ನು ಹಾಕಿ. ಕೊನೆಗೆ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ.(ತಯಾರಾದ ಈ ಮಿಶ್ರಣವನ್ನು ಗೊಜ್ಜಿನ ತರಹ ಶೇಖರಿಸಿ ಅನ್ನಕ್ಕೆ ಹಾಕಿ ಕೊಂಡು ಬೇಕು ಅನಿಸಿದಾಗ ಕಲಿಸಿ ತಿನ್ನಬಹುದು ).ನಂತರ ಅನ್ನವನ್ನು ಈ ಮಿಶ್ರಣಕ್ಕೆ ಬೆರೆಸಿದರೆ ಬಿಸಿ ಬಿಸಿ ಚಿತ್ರಾನ್ನ ಸವಿಯಲು ಸಿದ್ಧ.

Method:
  • Cook the rice, cool and keep aside.
  • Heat oil in a deep bottomed pan.
  • Add  mustard seeds, Curry leaves
  • And then add  Bengal Gram, Black Gram and  Ground Nut
  • Cook until dals change color to light brown.
  • Then add Onion, Chillies, tomato, Tamarind(You can use lime also instead of tamarind),  Jeera and Methi Powder, Turmeric powder, salt and grated coconut one by one in order.
  • Boil it well and Finally add Coriander leaves.
  • Now to this mixture add the rice and mix it well.
  • Now chitranna is ready to serve.

1 comment:

  1. ಚಿತ್ರಾನ್ನ ಚೆನ್ನಾಗಿತ್ತು, ಚಿಕನ್ ಬಿರ್ಯಾನಿ ಮಾಡೋದು ಹೇಳಿ ಕೊಡಿ ಪ್ಲೀಸ್.

    ReplyDelete