Sunday, March 4, 2012

ನಮ್ಮ ನಾಡು

ಕರ್ನಾಟಕ ಭಾರತದ ದಕ್ಷಿಣ ಭಾಗದಲ್ಲಿದೆ.ನವೆಂಬರ್ ೧ ೧೯೫೬ ರಲ್ಲಿ ನಿರ್ಮಾಣವಾಯಿತು . ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಇದಕ್ಕೆ ಮೊದಲು ಮೈಸೂರು ಎಂದು ಕರೆಯಲಾಗುತ್ತಿತ್ತು ನಂತರ ೧೯೭೩ ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.ಕರ್ನಾಟಕ ೩೦ ಜಿಲ್ಲೆಗಳಿಂದ ಕೂಡಿದೆ. ಇಲ್ಲಿ ಪ್ರಮುಖವಾಗಿ ಮಾತನಾಡುವ ಭಾಷೆಗಳು ಕನ್ನಡ, ತುಳು ಹಾಗು ಕೊಂಕಣಿ.ಕರ್ನಾಟಕ ಸಂಗೀತ, ಸಾಹಿತ್ಯ , ಕ್ರೀಡೆ , ಮನೋರಂಜನೆ ಇನ್ನೂ  ಮುಂತಾದ ಕ್ಷೇತ್ರಗಳಲ್ಲಿ ಹೆಸರು ಗಳಿಸಿಕೊಂಡಿದೆ . ಅಷ್ಟೇ ಇಲ್ಲದೆ ಬೇಲೂರು, ಹಂಪೆ, ಬಾದಾಮಿ, ಐಹೊಳೆ, ಮೈಸೂರು , ಜೋಗ ಜಲಪಾತ, ಗೊಮ್ಮಟೇಶ್ವರ  ಮುಂತಾದ ಐತಿಹಾಸಿಕ ಕ್ಷೇತ್ರಗಳು ಪ್ರವಾಸಿಗರ ಮನಸೆಳೆಯುತ್ತಿವೆ.ಅಷ್ಟೇ ಅಲ್ಲದೆ ಶ್ರೀಗಂಧ, ತೇಗ , ಹೊನ್ನೆ ಮುಂತಾದ ಬೆಲೆಬಾಳುವ ಮರಗಳು ಇಲ್ಲಿವೆ. ವೀರಗಾಸೆ, ಕಂಸಾಳೆ, ಕೋಲಾಟ, ಯಕ್ಷಗಾನ, ಡೊಳ್ಳು ಕುಣಿತ ಇಲ್ಲಿನ ಪ್ರಮುಖ  ನೃತ್ಯ ಶೈಲಿಗಳು. ಜನಪದ ಗೀತೆಗಳು ಹಳ್ಳಿಜನರ ಜೀವಾಳ.ಅನ್ನ, ರಾಗಿ ಮುದ್ದೆ, ಚಪಾತಿ, ರೊಟ್ಟಿ, ಉಪ್ಪಿಟ್ಟು, ಬಿಸಿ ಬೇಳೆ ಬಾತ್, ಚಿತ್ರಾನ್ನ ಇಲ್ಲಿನ ಜನರ ಸಾಮಾನ್ಯ ಆಹಾರ.ಮೈಸೂರ್ ಪಾಕ್, ಕುಂದ, ಧಾರವಾಡ್ ಪೇಡ , ಜಿಲೇಬಿ ಇಲ್ಲಿನ ಸಿಹಿ ತಿನಿಸುಗಳು.
 ಕೃಷ್ಣ ಮತ್ತು ಕಾವೇರಿ ಇಲ್ಲಿನ ಪ್ರಮುಖ ನದಿಗಳು .ಕರ್ನಾಟಕ ೮ನೆ ದೊಡ್ಡ ರಾಜ್ಯವಾಗಿದೆ .

ಭಾರತದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರವಾಸೋದ್ಯಮದ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರವು ಇಡೀ ದೇಶದಲ್ಲೇ ಮಾಹಿತಿ ತಂತ್ರಜ್ನ್ಯಾನ ಕ್ಷೇತ್ರದಲ್ಲಿ ಕೇಂದ್ರಬಿಂದುವಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನೂ ಉತ್ತುಂಗಕ್ಕೇರಿಸಿದೆ. ಅಷ್ಟೆ ಅಲ್ಲದೆ, ಪ್ರವಾಸೋದ್ಯಮದ ಕಾಲಕ್ರಮೇಣ ಬೆಳವಣಿಗೆಯಿಂದ ಹಲವಾರು ರಿಸಾರ್ಟಗಳು, ಹೋಮ್ ಸ್ಟೇ ಗಳು ರಾಜ್ಯಾದ್ಯಂತ ನಾಯಿ ಕೊಡೆಗಳಂತೆ ನಿರ್ಮಾಣಗೊಂಡಿದ್ದು ಉತ್ತಮವಾದ ಪ್ರಯಾಣದ ಅನುಭವವನ್ನು ಕೊಡುವಲ್ಲಿ ಸಫಲವಾಗಿವೆ. ಕರ್ನಾಟಕವನ್ನು ಭೌಗೋಳಿಕವಾಗಿ 'ಕರಾವಳಿ' ಹಾಗು 'ಮಲೆನಾಡು' ಎಂದು ವಿಂಗಡಿಸಲಾಗಿದೆ. ಅದರಲ್ಲೂ ಮಲೆನಾಡು ಪಶ್ಚಿಮ ಘಟ್ಟಗಳು ಮತ್ತು ಬಯಲುಸೀಮೆಯನ್ನು ಒಳಗೊಂಡಿದ್ದು, ಬಯಲುಸಿಮೆಯನ್ನು ಉತ್ತರ ಹಾಗು ದಕ್ಷಿಣ ಭಾಗದ ಬಯಲುಸೀಮೆಗಳೆಂದು ವಿಭಜಿಸಲಾಗಿದೆ.

ಕರ್ನಾಟಕ

ಹವಾಮಾನ
ಸಮಾನ್ಯವಾಗಿ ಕರ್ನಾಟಕವು ನಾಲ್ಕು ಋತುಗಳನ್ನು ಹೊಂದಿದ್ದು, ಅವುಗಳು ಬೇಸಿಗೆಗಾಲ, ಮುಂಗಾರು ಮಳೆಗಾಲ, ಹಿಂಗಾರು ಮಳೆಗಾಲ ಮತ್ತು ಚಳಿಗಾಲ. ಹಿಂಗಾರು ಮಳೆಗಾಲಾವಧಿಯಾದ ಅಕ್ಟೋಬರ ನಿಂದ ಡಿಸೆಂಬರ ಹಾಗು ಚಳಿಗಾಲದಾವಧಿಯಾದ ಜನವರಿಯಿಂದ ಫೆಬ್ರುವರಿಯು ಇಲ್ಲಿಗೆ ಭೇಟಿ ನೀಡಲು ಅತಿ ಪ್ರಶಸ್ತವಾದ ಸಮಯವಾಗಿದೆ.
ಭಾಷೆಗಳು
ಕನ್ನಡವು ರಾಜ್ಯದ ಅಧಿಕೃತ ಭಾಷೆಯಾಗಿದೆ. ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ ಮತ್ತು ಕೊಂಕಣಿ ಭಾಷೆಗಳನ್ನೂ ಕೇಳಬಹುದು. ರಾಷ್ಟ್ರದ ಜನಪ್ರಿಯ ಭಾಷೆಯಾದ ಹಿಂದಿಯನ್ನೂ ಕೂಡ ಇಲ್ಲಿ ಮಾತನಾಡಬಲ್ಲರು. ಮಾಹಿತಿ ತಂತ್ರಜ್ನ್ಯಾನ ಕ್ಷೇತ್ರದಲ್ಲಾದ ಪ್ರಗತಿಯಿಂದಾಗಿ ದೇಶದ ಹಲವಾರು ರಾಜ್ಯ್ಗಳಿಂದ ಜನರು ಇಲ್ಲಿ ವಲಸೆ ಬಂದಿದ್ದು ಮಲಯಾಳಮ್, ತಮಿಳು ಹಾಗು ತೆಲುಗು ಭಾಷೆಗಳನ್ನೂ ಕಾಣಬಹುದಾಗಿದ್ದು ಇಂಗ್ಲಿಷ ಭಾಷೆಯನ್ನು ಸಾಮಾನ್ಯವಾಗಿ ಬಹು ಜನರು ಮಾತನಾಡಬಲ್ಲವರಾಗಿದ್ದಾರೆ.
ಕರ್ನಾಟಕದಲ್ಲಿಯ ಪ್ರವಾಸೋದ್ಯಮ
ರಾಜ್ಯದಲ್ಲಿ 30 ಜಿಲ್ಲೆಗಳಿದ್ದು ಕರ್ನಾಟಕ ಪ್ರವಾಸೋದ್ಯಮವು ಪ್ರವಾಸಿಗರಿಗೆ ಹೆಚ್ಚಿನ ಆಯ್ಕೆಗಳನ್ನು ಕೊಡಬಲ್ಲುದಾಗಿದೆ. ಪ್ರಯಾಣಿಕನೆ ಇರಲಿ, ಸಾಹಸಗಾರನೆ ಇರಲಿ, ಅನ್ವೇಷಕನೆ ಇರಲಿ ಅಥವಾ ಪ್ರಾಕೃತಿಕ ಅದ್ಭುತಗಳನ್ನು ಸವಿಯಬಯಸುವ ಸದಭಿರುಚಿಯ ವ್ಯಕ್ತಿಯೆ ಆಗಿರಲಿ, ಅವನ ಅಭಿರುಚಿಗೆ ತಕ್ಕ ಹಾಗೆ ಹಲವು ಬಗೆಯ ತಾಣ ಹಾಗು ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ.ಕೊಡಗಿನಲ್ಲಿಯ ಉಬ್ಬು ತಗ್ಗಿನ ಪ್ರದೇಶಗಳು, ಮನಮೋಹಕವಾದ ಕಣಿವೆಗಳು ಅತ್ಯಂತ ಜನಪ್ರಿಯವಾಗಿದ್ದು, ಇದನ್ನು 'ಭಾರತದ ಸ್ಕಾಟ್ ಲ್ಯಾಂಡ್' ಎಂದೇ ಕರೆಯಲಾಗುತ್ತದೆ. ಈ ಗಿರಿಧಾಮವು ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಮಹತ್ತರವಾದ ಭಾಗವಾಗಿದೆ.
ಇದಲ್ಲದೆ, ವೈವಿಧ್ಯಮಯ ಚಿಕ್ಕ ಪುಟ್ಟ ಜಲಪಾತಗಳನ್ನೊಳಗೊಂಡ ಕೆಮ್ಮಣ್ಣಗುಂಡಿ, ಹಚ್ಚ ಹಸಿರಿನ ಕಂಬಳಿ ಹೊದ್ದು ನಿಂತಿರುವ ಕುದುರೆಮುಖಕರ್ನಾಟಕದಲ್ಲಿ ಕಾಣಸಿಗುವ ಅನೇಕ ಗಿರಿಧಾಮಗಳಲ್ಲಿ ಮಹತ್ತರವಾಗಿದ್ದು ಕರ್ನಾಟಕದ ಕಾಫಿ ಭೂಮಿಯೆಂದೆ ಪ್ರಸಿದ್ಧವಾದ ಚಿಕ್ಕಮಗಳೂರುಜಿಲ್ಲೆಯಲ್ಲಿ ಕಾಣಬಹುದಾಗಿದೆ. ರಜಾ ದಿನಗಳಲ್ಲಿ ಕಡಲ ತೀರಗಳಿಗೆ ಪ್ರವಾಸ ಕೈಗೊಳ್ಳಲು ಮಂಗಳೂರು ತನ್ನ ವಿಸ್ತಾರವಾಗಿ ಚಾಚಿದ ಸಮುದ್ರ ತೀರಗಳಿಂದ ಆಕರ್ಷಿಸುತ್ತ ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ತಾಣವಾಗಿದೆ.
ರಾಜ್ಯದ ಇನ್ನಿತರ ಪ್ರಮುಖ ಯಾತ್ರಾ ಸ್ಥಳಗಳಾದ ಕೊಲ್ಲೂರು ಮೂಕಾಂಬಿಕೆ, ಉಡುಪಿಯ ಕೃಷ್ಣ ದೇಗುಲ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿಯ ಶಾರದಾಂಬೆ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಮುಂತಾದವುಗಳು ಮಂಗಳೂರಿನ ಸುತ್ತಮುತ್ತಲಿರುವ ಪ್ರಮುಖ ಕ್ಷೇತ್ರಗಳಾಗಿವೆ. ಶಾಂತ ಹಾಗು ಮೋಹಕ ಸಮುದ್ರ ತೀರಕ್ಕೆ ಮರವಂತೆಯು ಉದಾಹರಣೆಯಾಗಿದ್ದು, ಇನ್ನಿತರ ಬೀಚ್ ಗಳಾದ ಬೈಂದೂರುಮಲ್ಪೆಕಾರವಾರ ಮುಂತಾದವುಗಳು ಈ ಪಟ್ಟಿಯಲ್ಲಿ ಸೇರುತ್ತವೆ.
ಐತಿಹಾಸಿಕ ಅಭಿರುಚಿಯುಳ್ಳ ಸ್ಥಳಗಳು ರಾಜ್ಯದಲ್ಲಿ ತುಂಬಿದ್ದು ಕರ್ನಾಟಕ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆಯನ್ನೆ ನೀಡಿದೆ. ಇಲ್ಲಿರುವ ಮೈಸೂರು, ಬಾದಾಮಿಹಂಪಿಬೇಲೂರುಹಳೆಬೀಡುಶ್ರವಣಬೆಳಗೊಳ ಮುಂತಾದವು ಕೆತ್ತಲ್ಪಟ್ಟಿರುವ ಶಿಲ್ಪಕಲೆಗಳಿಗೆ ಪ್ರಖ್ಯಾತಿಯಾಗಿದ್ದು ಕಳೆದುಹೋದ ಕಾಲದ ಬಗ್ಗೆ ಸಾವಿರಾರು ಕಥೆಗಳನ್ನು ಹೇಳುತ್ತವೆ. ಇನ್ನು ಸಾಹಸ ಬಯಸುವ ಸಂದರ್ಶಕರು ತಮ್ಮ ಅಭಿರುಚಿಗೆ ತಕ್ಕ ಹಾಗೆ ಅನೇಕಾನೇಕ ಸ್ಥಳಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಕಾವೇರಿ ಮೀನುಗಾರಿಕೆ ಶಿಬಿರಭೀಮೇಶ್ವರಿ, ಗಾಲಿಬೊರೆ ಮತ್ತು ದೊಡ್ಡಮಾಕಳಿ ಮೀನು ಹಿಡಿಯುವ ಉಲ್ಲಾಸಮಯ ಅನುಭವವನ್ನು ಒದಗಿಸುತ್ತವೆ. ಸಾವನದುರ್ಗಅಂತರಗಂಗೆಶಿವಗಿರಿರಾಮನಗರ ಮುಂತಾದವುಗಳುಪರ್ವತಾರೋಹಣ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಹಾಗಿವೆ. ಹೊನ್ನೆಮರಡು, ಶಿವಗಂಗೆಶಿವನಸಮುದ್ರಸಂಗಮ ಮುಂತಾದವುಗಳು ದೋಣಿ ವಿಹಾರ, ತೆಪ್ಪ ಸವಾರಿ ಹಾಗು ಇನ್ನಿತರ ಜಲಕ್ರೀಡೆಗಳಿಗೆ ಹೆಸರುವಾಸಿಯಾಗಿವೆ.
ಕರ್ನಾಟಕದಲ್ಲಿ ವನ್ಯಜೀವನವು ಆಕರ್ಷಕವಾಗಿದ್ದು, ಜನಪ್ರಿಯ ಹುಲಿ ಸಂರಕ್ಷಣೆಯ ತಾಣವಾದ ಬಂಡಿಪುರ, ಆನೆಗಳಿಗೆ ಹೆಸರುವಾಸಿಯಾದ ಕಬಿನಿಮತ್ತು ನಾಗರಹೊಳೆ ಪ್ರವಾಸಿಗರ ನಡುವೆ ಪ್ರಸಿದ್ಧವಾಗಿವೆ. ಇನ್ನೊಂದೆಡೆ ಬಿಳಗಿರಿ ರಂಗನ ಬೆಟ್ಟ, ದಾಂಡೇಲಿ ಮತ್ತು ಭದ್ರಾ ವನ್ಯಜೀವಿ ಧಾಮವು ನೋಡುಗರಿಗೆ ತನ್ನ ವೈವಿಧ್ಯಮಯ ಜೀವಸಂಕುಲಗಳ ಸೊಬಗನ್ನು ತೋರ್ಪಡಿಸುತ್ತದೆ.ಬೆಂಗಳೂರು, ಮೈಸೂರುಮಂಗಳೂರು ಮುಂತಾದವು ರಾಜ್ಯದ ಪ್ರಮುಖ ನಗರಗಳಾಗಿದ್ದು, ಇನ್ನೂ ಹಲವು ಪಟ್ಟಣಗಳು ಈ ದೀಸೆಯಲ್ಲಿ ಬೆಳವಣಿಗೆ ಹೊಂದುತ್ತಿವೆ. ತನ್ನ ವೈವಿಧ್ಯಮಯ ಸಂಸ್ಕೃತಿ, ಐಟಿ-ಬಿಟಿ ಕಂಪನಿಗಳು, ಮಾಲ್ ಗಳು ಮುಂತಾದವುಗಳಿಂದ ಬೆಂಗಳೂರು ನಿಜವಾಗಿಯೂ ಒಂದು 'ಮೆಟ್ರೊಪಾಲಿಟನ್' ನಗರವಾಗಿದ್ದು ಇನ್ನು ಹಲವು ನಗರಗಳು ಇದನ್ನು ಹಿಂಬಾಲಿಸುತ್ತಿವೆ ಎಂದರೆ ತಪ್ಪಾಗಲಾರದು. ಈ ಕೆಳಗಿನವುಗಳು ವಿವಿಧ ರಜಾದಿನಗಳ ಅವಶ್ಯಕತೆಗಳಿಗನುಸಾರವಾಗಿ ವಿಂಗಡಿಸಲಾದ ಕರ್ನಾಟಕದ ವಿವಿಧ ಸ್ಥಳಗಳು.

2 comments: