Tuesday, November 26, 2013

songs with wonderful lyrics

ಗೆಳೆಯ (2007) - ಈ ಸಂಜೆ ಯಾಕಾಗಿದೆ

 

ಸಂಗೀತ: ಮನೋಮೂರ್ತಿ

ಆ ಆ ಆ...ಆ ಆ ಆ...
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ..//೧//
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ..
ಏಕಾಂತವೇ ಆಲಾಪವೂ ಏಕಾಂಗಿಯಾ ಸಲ್ಲಾಪವೂ
ಈ ಮೌನ ಬಿಸಿಯಾಗಿದೆ ಓ...ಈ ಮೌನ ಬಿಸಿಯಾಗಿದೆ // ಈ ಸಂಜೆ..//
ಲಾ ಲಾ ಲ ಲ ಲಾ ಲ ಲಾ ಲಾ....
ಈ ನೋವಿಗೆ ಕಿಡೀ ಸೋಕಿಸಿ ಮಜ ನೋಡಿವೇ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೇ ನನ್ನಾ ಕ್ಷಣಾ
ನೆನಪೆಲ್ಲವೂ ಹೂವಾಗಿದೆ ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೇ..ಈ ಜೀವ ಕಸಿಯಾಗಿದೇ ..// ಈ ಸಂಜೆ..//
ಆ ಆ ಆ...ಆ ಆ ಆ..
ನೀನಿಲ್ಲದೇ ಆ ಚಂದಿರಾ ಈ ಕಣ್ಣಲೀ ಕಸವಾಗಿದೇ
ಅದನೂದುವಾ ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೇ
ಆಕಾಶದೀ ಕಲೆಯಾಗಿದೇ ಈ ಸಂಜೆಯಾ ಕೊಲೆಯಾಗಿದೇ
ಈ ಗಾಯ ಹಸಿಯಾಗಿದೇ...ಈ ಗಾಯ ಹಸಿಯಾಗಿದೇ ..// ಈ ಸಂಜೆ.. //

ಕವಿತೆ  ಕವಿತೆ  ನೀನೇಕೆ  ಪದಗಳಲಿ  ಕುಳಿತೆ (ಗಾಳಿಪಟ) 

ಸಾಹಿತ್ಯ : ಹೃದಯಶಿವ

ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ  ಬೆರೆತೆ
ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ..
ಓ  ಒಲವೆ .. ನೀ  ತಂದ  ಹಾಡಿಗೆ  ನಾ  ಸೋತೆ ..
ಕವಿತೆ  ಕವಿತೆ  ನೀನೇಕೆ  ಪದಗಳಲೇ  ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ ..

ಅವಳು  ಬರಲು  ಮನದಲ್ಲಿ  ಪದಗಳದೆ ಚಿಲುಮೆ
ಮನದ ಕಡಲ ದಡದಾಟೊ ಅಲೆಗಳಲು ನಲುಮೆ ..
ಹೊಮ್ಮುತಿದೆ.. ರಾಗದಲಿ ಸ್ವರ ಮೀರೋ ತಿಮಿರು ..
ಚಿಮ್ಮುತಿದೆ.. ಸುಳ್ಳಾಡುವ ಕವಿಯಾದ ಪೊಗರು ..
ಅವಳು  ಬರಲು  ಮನದಲ್ಲಿ  ಪದಗಳಧೆ  ಚಿಲುಮೆ ..
ಮನದ  ಕಡಲ  ದಡದಾಟೊ  ಅಲೆಗಳಲು  ನಲುಮೆ ..

ಮುಗಿಲ  ಹೆಗಲ  ಮೇಲೇರಿ  ತೇಲುತಿದೆ ಹೃದಯ ..
ಮಡಿಲ  ಹುಡುಕಿ  ಎದೆ  ಬಾಗಿಲಿಗೆ  ಬಂತೋ  ಪ್ರಣಯ ..
ಉನ್ಮಾದ  ತಾನಾಗಿ  ಹಾಡಗೋ ಸಮಯ ..
ಏಕಾಂತ  ಕಲ್ಲನ್ನು  ಮಾಡುವುದೋ  ಕವಿಯ ..
ಮುಗಿಲ  ಹೆಗಲ  Meler  ತೇಲುತಿದೆ ಹೃದಯ ..
ಮಡಿಲ  ಹುಡುಕಿ  ಎದೆ  ಬಾಗಿಲಿಗೆ  ಬಂತೋ  ಪ್ರಣಯ ..

ಗಗನವೇ  ಬಾಗಿ  (ಸಂಜು  ವೆಡ್ಸ್  ಗೀತ )  

ಸಾಹಿತ್ಯ : ಕವಿರಾಜ್ 

ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಮನ  ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..

ಜೀವನ .. ಈ  ಕ್ಷಣ .. ಶುರುವಾದಂತಿದೆ ..
ಕನಸಿನ  ಊರಿನ  ಕದ  ತೆರೆಯುತ್ತಿದೆ ..
ಅಳಬೇಕು  ಒಮ್ಮೆ  ಅನ್ಥನಿಸಿದೆ .. ಕುಶಿಯೀಗ  ಮೇರೆ  ಮೀರಿ ..
ಮಧುಮಾಸದಂತೆ  ಕೈಚಾಚಿದೆ .. ಹಸಿರಾಯ್ತು  ನನ್ನ  ದಾರಿ
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ   ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ   ಮನಸಲಿ .. ನಿನ್ನ  ಆಗಾಮನ  ಈ  ದಿನ ..
ನೀಡುವ  ಮುನ್ನ  ನಾನೇ   ಆಮಂತ್ರಣ ..

ಸಾವಿನ .. ಅಂಚಿನ .. ಬದುಕಂಥಾದೆ  ನೀನು ..
ಸಾವಿರ .. ಸೂರ್ಯರ .. ಬೆಳಕಂಥಾದೆ  ನೀನು ..
ಕೊನೆಯಾಸೆ  ಒಂದೇ  ಈ  ಜೀವಕೆ  ನಿನ್ನ  ಕೂಡಿ  ಬಾಳಬೇಕು
ಪ್ರತಿ  ಜನ್ಮದಲ್ಲೂ   ನೀ  ಹೀಗೆಯೇ  ನನ್ನ  ಪ್ರೀತಿ  ಮಾಡಬೇಕು ..
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಾಮನ  ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ .

ಒಂದೇ  ಸಮನೆ  ನಿಟ್ಟುಸಿರು . (ಗಾಳಿಪಟ )

ಒಂದೇ   ಸಮನೆ  ನಿಟ್ಟುಸಿರು .. ಪಿಸುಗುಡುವ  ತೀರದ  ಮೌನ
ತುಂಬಿ  ತುಳುಕೋ  ಕಂಗಳಲಿ .. ಕರಗುತಿದೆ  ಕನಸಿನ  ಬಣ್ಣ
ಎದೆಯ  ಜೋಪಡಿಯ  ಒಳಗೆ .. ಕಾಲಿಡದೆ  ಕೊಲುತಿದೆ  ಒಲವು
ಮನದ  ಕಾರ್ಮುಗಿಲಿನ  ತುದಿಗೆ .. ಮಳೆಬಿಲ್ಲಿನಂತೆ  ನೋವು
ಕೊನೆ  ಇರದ  ಏಕಾಂತವೆ  ಒಲವೇ...
ಒಂದೇ  ಸಮನೆ  ನಿಟ್ಟುಸಿರು .. ಪಿಸುಗುಡುವ  ತೀರದ  ಮೌನ
ತುಂಬಿ  ತುಳುಕೋ  ಕಂಗಳಲಿ .. ಕರಗುತಿದೆ  ಕನಸಿನ  ಬಣ್ಣ
ಜೀವ  ಕಳೆವ  ಅಮೃತಕೆ .. ಒಲವೆಂದು  ಹೆಸರಿಡ ಬಹುದೇ
ಪ್ರಾಣ  ಉಳಿಸೋ  ಖಾಯಿಲೆಗೆ .. ಪ್ರೀತಿ   ಎಂದೆನ್ನ  ಬಹುದೇ
ಹೊಂಗನಸ  ಚಾದರದಲ್ಲಿ . ಮುಳ್ಳಿನ  ಹಾಸಿಗೆಯಲಿ  ಮಲಗಿ
ಯಾತನೆಗೆ  ಮುಗುಳ್ನಗೆ  ಬರಲು .. ಕಣ್ಣ  ಹನಿ  ಸುಮ್ಮನೆ  ಒಳಗೆ
ಅವಳನ್ನೇ  ಜಪಿಸುವುದೆ  ಒಲವೆ
ಜೀವ  ಕಳೆವ  ಅಮೃತಕೆ .. ಒಲವೆಂದು  ಹೆಸರಿಡ  ಬಹುದೇ
ಪ್ರಾಣ   ಉಳಿಸೋ  ಖಾಯಿಲೆಗೆ . . ಪ್ರೀತಿ  ಎಂದೆನ್ನ  ಬಹುದೇ
ನಾಲ್ಕು  ಪದದ  ಗೀತೆಯಲಿ .. ಮಿಡಿತಗಳ  ಬಣ್ಣಿಸ  ಬಹುದೇ
ಮೂರು   ಸ್ವರದ  ಹಾಡಿನಲ್ಲಿ .. ಹೃದಯವನು  ಹರಿಬಿಡ ಬಹುದೇ
ಉಕ್ಕಿ  ಬರುವ  ಕಂಠದಲಿ .. ನರಳುತಿದೆ  ನಲುಮೆಯ  ಗಾನ
ಬಿಕ್ಕಳಿಸುವ  ಎದೆಯೊಳಗೆ .. ನಗುತಲಿದೆ  ಮಡಿದ  ಕವನ
ಒಂಟಿತನದ  ಗುರುವೇ  ಒಲವೆ

ಅಭಯ್(2009) - ಬಾನು ಕೆಂಪಾದಂತೆ ಗಾಳಿ ಇಂಪಾದಂತೆ

ಸಂಗೀತ: ವಿ ಹರಿಕೃಷ್ಣ

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ?
ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ?
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ ಆತಂಕವಾದಿಯೇ...
ನಿನಗಾಗಿ ಕಾಯುವೆ...
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ?
ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಇನ್ನು ಚೂರೆ ಕಾಯಿಸು ಬಂದು ಚಂದ ಕಾಣಿಸು...
ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸ್ಸೊಂದೆ ಆದ ಮೇಲೆ ಮರೆಯಾಗಿ... ದೂರ
ಇರಲಾರೆ ಇರಲಾರೆ
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ?
ಒಂದೇ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರೂ ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೆ
ಜೊತೆಯಲ್ಲಿ ಇಂದು ನಿನ್ನ ಕುಶಿಯಾಗೀ... ಹಾರಿ
ಬರಲೇನು ಬರಲೇನು
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ ಆತಂಕವಾದಿಯೇ...
ನಿನಗಾಗಿ ಕಾಯುವೆ..

ಆಕಸ್ಮಿಕ (1993) - ಬಾಳುವಂತ ಹೂವೆ


ಸಾಹಿತ್ಯ ಮತ್ತು ಸಂಗೀತ : ಹಂಸಲೇಖ

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆಯೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ
ಮದ್ಯ ಮನಗಳಿನ್ದ ಚಿಂತೆ ಬೇಳೆವುದಂತೆ
ಅಂಖ್ಯೆ ಇರದ ಮನಸನು ದಂಡಿಸುವುದು ನ್ಯಾಯ
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜಯಿಸಬೇಕು
ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ

ಗಾಳಿಮಾತು(1981) - ನಗೆಸಲು ನೀನು

ಸಂಗೀತ: ರಾಜನ್-ನಾಗೇಂದ್ರ


ಆಆಆಆಆಆಆಆಆಆಆಆಆಆಆಆಆಆ
ನಗಿಸಲು ನೀನು
ನಗುವೆನು ನಾನು || ೨
ನಾನೊಂದು ಬೊಂಬೆಯು
ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯು ನೀ ಸೂತ್ರಧಾರಿ
ವೀಣೆಯು ನಾನು
ವೈಣಿಕ ನೀನು
ತಂತಿಯ ಮೀಟದೆ
ನುಡಿಯುವುದೇನು
ಆಆಆಆಆಆಆಆಆಆಆಆ ಆಆಆಆಆಆಆಆಆ
ವೀಣೆಯು ನಾನು
ವೈಣಿಕ ನೀನು
ತಂತಿಯ ಮೀಟದೆ
ನುಡಿಯುವುದೇನು
ಬಯಸಿದ ರಾಗ ನುಡಿಸಿ
ನೀ ನಲಿದಾಗ
ನನಗೂ ಆನಂದ ನಿನ್ನಿಂದ
ನುಡಿಸಲು ನೀನು
ನುಡಿಯುವೆ ನಾನು
ನುಡಿಸಲು ನೀನು
ನುಡಿಯುವೆ ನಾನು
ನಾನೊಂದು ಬೊಂಬೆಯು
ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ
ನಗೆಸಲು ನೀನು
ನಗುವೆನು ನಾನು
ನಾನೊಂದು ಬೊಂಬೆಯು
ನೀ ಸೂತ್ರಧಾರಿ
ಕಾಣದೆ ಎಲ್ಲೊ ನೀನಿರಲೇನು
ಕುಣಿಸುವೆ ನಿನ್ನ ತಾಳಕೆ ನನ್ನ
ನಂತ ನಂತಂತ ನಂತ ನಂತಂತ ನಂತ ನಂತಂತ ನಂತನಂತನೊ
ತನನನ ತನನನ ತನನನ ನನನನ
ಆಆಆಆಆಆಆಆ
ಕಾಣದೆ ಎಲ್ಲೊ ನೀನಿರಲೇನು
ಕುಣಿಸುವೆ ನಿನ್ನಾ ತಾಳಕೆ ನನ್ನ
ಕೈ ಹಿಡಿದೆನ್ನ ನಡೆಸು
ಕರುಣಿಸು ಹರಸು
ನನ್ನ ಸೇವೆ ಸ್ವೀಕರಿಸು
ನಡೆಸಲು ನೀನು
ನಡೆಯುವೆ ನಾನು || ೨
ನಾನೊಂದು ಬೊಂಬೆಯು
ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ
ನಗೆಸಲು ನೀನು
ನಗುವೆನು ನಾನು
ನಾನೊಂದು ಬೊಂಬೆಯು
ನೀ ಸೂತ್ರದಾರಿ

ಗಾಳಿ ಮಾತು (1981) - ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ

ಸಂಗೀತ: ರಾಜನ್-ನಾಗೇಂದ್ರ


ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..ಒಮ್ಮೆ ನಿನ್ನನ್ನೂ..
ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡೂ ಬೆರೆಗಾದೆ...
||ಒಮ್ಮೆ ನಿನ್ನನ್ನೂ..||
ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...
||ಒಮ್ಮೆ ನಿನ್ನನ್ನೂ...||

ಗೆಜ್ಜೆಪೂಜೆ (1970) - ಪಂಚಮವೇದ ಪ್ರೇಮದನಾದ

ಸಂಗೀತ: ವಿಜಯಭಾಸ್ಕರ್ 

ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ ಹೃದಯ ಸಂಗಮ ಅನುರಾಗ ಬಂಧ
ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ
ರಾಧಾಮಾಧವ ವೇಣುವಿಹಾರ ಗೀತೆಯೆ ಪ್ರೀತಿಯ ಜೀವನಸಾರ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯ ತಾರೆ ಭವ್ಯ ರಸಿಕತೆ ಬಾಳಿಗಾಸರೆ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಗನ್(2011) - ತಾಜಾ ತಾಜಾ ಕನಸುಗಳು



ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ
ಇದು ಪ್ರೀತಿ ಮೂಡಿರೋ ಮೊದಲ ಸೂಚನೆ
ರಾಜ ರಾಣಿ ಮನಸುಗಳು ರೋಜಹೂವ ಹುಡುಕುತಿದೆ
ಇದು ಪ್ರೀತಿ ನೀಡಿರೋ ಮಧುರ ಯಾತನೆ
ಅಲೆಮಾರಿ ಸುಕುಮಾರಿ ಜೊತೆ ಸೇರಿ ಹೊಸ ದಾರಿ
ಹಿಡಿದಾಯ್ತು ನಡೆದಾಯ್ತು ಸುಮ್ಮನೆ........|
ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ
ಇದು ಪ್ರೀತಿ ಮೂಡಿರೋ ಮೊದಲ ಸೂಚನೆ
ರಾಜ ರಾಣಿ ಮನಸುಗಳು ರೋಜಹೂವ ಹುಡುಕುತಿದೆ
ಇದು ಪ್ರೀತಿ ನೀಡಿರೋ ಮಧುರ ಯಾತನೆ
ಮಳೆ ಬಿಲ್ಲಿನ ತೋರಣ ಮನಕೆ ಕಟ್ಟಾಗಿದೆ
ಇಳಿ ಸಂಜೆಯ ಚಾರಣ ದಿನಚರಿಯಲ್ಲಿ ಸೇರಿದೆ
ಪಿಸುಮಾತು ನುಡಿವಂತ ಮನಸಾಗಿದೆ
ಹಿತವಾದ ಅಪರಾದ ಮೊದಲಾಗಿದೆ
ಕುಶಿ ಇಂದ ಕುಣಿವಂತ ಕುಶಿಯಾಗಿದೆ
ಇದಕಿಂತ ಸೊಗಸಾದ ಸುಖ ಎಲ್ಲಿದೆ.........|
ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ
ಇದು ಪ್ರೀತಿ ಮೂಡಿರೋ ಮೊದಲ ಸೂಚನೆ
ಹುಸಿ ಕೋಪವ ತೋರಲು ನೆಪದ ಕೊರತೆ ಇದೆ
ತುಸು ತಾಕಲು ಕೈಗಳು ಹೃದಯ ಹೊರಳಾಡಿದೆ
ಅದೇ ಮಾತು ಅದೇ ಮಾತು ದಿನ ಸಾಗಿದೆ
ನಗುವಂತು ಪುರುಸೊತ್ತು ಕೊಡದಂತಿದೆ
ಎದೆ ತುಂಬಾ ಹೊಸಜಂಬ ನೆಲೆ ನಿಂತಿದೆ
ತುನುತುಂಬ ಭೂಕಂಪ ಶುರುವಾಗಿದೆ.......|
ರಾಜ ರಾಣಿ ಮನಸುಗಳು ರೋಜಹೂವ ಹುಡುಕುತಿದೆ
ಇದು ಪ್ರೀತಿ ನೀಡಿರೋ ಮಧುರ ಯಾತನೆ
ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ
ಇದು ಪ್ರೀತಿ ಮೂಡಿರೋ ಮೊದಲ ಸೂಚನೆ
ಅಲೆಮಾರಿ ಸುಕುಮಾರಿ ಜೊತೆ ಸೇರಿ ಹೊಸ ದಾರಿ
ಹಿಡಿದಾಯ್ತು ನಡೆದಾಯ್ತು ಸುಮ್ಮನೆ......|
ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ
ಇದು ಪ್ರೀತಿ ಮೂಡಿರೋ ಮೊದಲ ಸೂಚನೆ
ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ
ಇದು ಪ್ರೀತಿ ಮೂಡಿರೋ ಮೊದಲ ಸೂಚನೆ

ಚಂದನದ ಗೊಂಬೆ (1979) - ಕಂಗಳು ತುಂಬಿರಲು

ಸಂಗೀತ: ರಾಜನ್-ನಾಗೇಂದ್ರ 

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..ಕಂಗಳು..
ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೆ ಕಿವಿಗಳಲೀ
ನಿಮ್ಮ ನೋಟ ಇನ್ನೂ ನನ್ನ ಹೃದಯವೀಣೆ ಮೀಟಿರಲೂ
ನಿಮ್ಮ ಸ್ನೇಹ ಮನಸಿನಲಿ ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದಾ ನನ್ನಾ ಅಮ್ಮಾ ಎಂದು ಕೂಗಿರಲೂ
ನೊಂದ ನನ್ನ ಜೀವ ಇಂದು ಎನೋ ಸುಖಾ ಕಾಣುತಿದೇ..ಕಂಗಳು..
ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ..ಆ..ಆ.
ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೇ
ನಿಮ್ಮ ಮನೆ ದೀಪವಾಗೀ ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ ಬಾಳಾ ನಾನೂ ಸಾಗಿಸುವೇ..ಕಂಗಳು..

ಚಲಿಸುವ ಮೋಡಗಳು (1982) - ಜೇನಿನ ಹೊಳೆಯೊ ಹಾಲಿನ ಮಳೆಯೊ

ಸಂಗೀತ: ರಾಜನ್-ನಾಗೇಂದ್ರ 

ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ.... ||೨||
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ
ಆಹಾ..
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ.... ||೨||
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳು ನುಡಿದರೆ ಸಕ್ಕರೆಯಂತೆ
ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಹ ಹಾ ಹ ಹ ಹ!! ಅಹ ಅಹಾ
ಅಹ ಅಹಾ!! ಹ ಹಾ ಹ ಹ ಹ!!
ಕುಮಾರವ್ಯಾಸನ ಕಾವ್ಯದ ಚೆಂದ
ಕವಿ ಸರ್ವಘ್ನನ ಪದಗಳ ಅಂದ ||೨||
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಸುಧೆಯೊ ಕನ್ನಡ ಸವಿ ನುಡಿಯೊ

ಚಿರು (೨೦೧೦) - ಇಲ್ಲೇ ಇಲ್ಲೇ ಎಲ್ಲೋ

ಸಂಗೀತ : ಗಿರಿಧರ್ ದಿವಾನ್
ರಚನೆ : ಗೌಸ್ ಪೀರ್
ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೆಳದೇನೆ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೆಳದೇನೆ ನಿನಗೆ ಏನೋ ಆಗಿದೆ
ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ...
ಮುಚ್ಚು ಮರೆಯ ಮಾಡದೆ ಹುಚ್ಚು ಮನವು ಕಾಡಿದೆ
ಏನು ಸ್ಪಷ್ಟವಾಗದಂಥ ಭಾವ ಇಷ್ಟವಾಗಿದೆ
ಇಂಥ ಆಸೆ ಏಕಿದೆ ನನಗೆ ಅರ್ಥವಾಗಧೆ
ಸಾಕು ಮಾಡು ನಿನ್ನ ಕನಸು ತುಂಬ ದೂರ ಹೋಗದೆ
ನಾನು ನೋಡೋ ಲೋಕವೆಲ್ಲ ಪ್ರೆಮಲೋಕದಂತಿದೆ.
ಹೇಳದೇನೆ ಕೆಳದೇನೆ ನನಗೆ ಏನೋ ಆಗಿದೆ..
ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ...
ಉಸಿರು ಉಸಿರಿನಲ್ಲಿಯು ಯಾರೋ ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂಥ ಮಧುರವಾದ ಯಾತನೆ
ಏಕೆ ಇಂಥ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆ
ಸವಿಯೋ ಸವಿಯೋ ನನ್ನ ಒಳಗೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೆಳದೇನೆ ನನಗೆ ಏನೋ ಆಗಿದೆ..
ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೆಳದೇನೆ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೆಲದೇನೆ ನಿನಗೆ ಏನೋ ಆಗಿದೆ
ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ...

ಚೈತ್ರದ ಪ್ರೇಮಾಂಜಲಿ (1992) - ಚೈತ್ರದ ಪ್ರೇಮಾಂಜಲಿಯ


ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ

ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಮಲ್ಲಿಗೆಯ ಮಳ್ಳಿ ಚೆಲುವಿನಲಿ ಮೆಲ್ಲುಲಿಯ ಮೆಲ್ಲ ನಗುವಿನಲಿ
ಸಂಪಿಗೆಯ ಮೆಲ್ಲ ನಗುವಿನಲಿ ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ ನಿನ್ನ ಹೆಸರೆ ಶ್ರುಂಗಾರ
ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
ಸೇವಂತಿಗೆ ಸೂಜೀಮಲ್ಲಿಗೆ
ಗಿಡವಾಗಿ ಎಲೆಯಾಗಿ ನಿನಗೆನಾ ಸರಿ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ
ಭಯವೇಕೆ ಅಂಜು ಮಲ್ಲಿಗೆಯೆ ಬಾ ಏಳು ಸುತ್ತು ಮಲ್ಲಿಗೆಯೆ
ಪಾರಿಜಾತ ವರವಾಗು ಸೂರ್ಯ ಕಾಂತಿ ಬೆಳಕಾಗು
ಮಧು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ
ನಶೆ ಏರಿಸೊ ಓ ರಜನಿ ಸುಮ
ಹೂದಾನಿ ಅಭಿಮಾನಿ ನಿನಗೆ ನಾ ಸಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ

ಪರಮಾತ್ಮ(೨೦೧೧) --- ಪರವಶನಾದೆನೂ ಅರಿಯುವ ಮುನ್ನವೇ

ಸಂಗೀತ: ವಿ ಹರಿಕೃಷ್ಣ

ಪರವಶನಾದೆನೂ ಅರಿಯುವ ಮುನ್ನವೇ ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ?
ಇದಕ್ಕಿಂತ ಬೇಗ ಇನ್ನೂ ಸಿಗಬಾರದಿತ್ತೆ ನೀನು
ಇನ್ನಾದರೂ ಕೂಡಿಟ್ಟುಕೋ ನೀ ನನ್ನನೂ... ಕಳೆಯುವ ಮುನ್ನವೇ
ಪರವಶನಾದೆನೂ ಅರಿಯುವ ಮುನ್ನವೇ... ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ...?
ನಿನ್ನ ಕಣ್ಣಿಗಂತು ನಾನು ನಿರುಪಯೋಗಿ ಈಗಲೂ...
ಇನ್ನು ಬೇರೆ ಏನು ಬೇಕು ಪ್ರೇಮಯೋಗಿಯಾಗಲೂ?
ಹೂ.....ಅರಳುವ ಸದ್ದನೂ ನಿನ್ನ ನಗೆಯಲ್ಲಿ ಕೇಳ ಬಲ್ಲೆ
ನನ್ನಾ... ಏಕಾಂತವನ್ನು ತಿದ್ದಿಕೊಡು ನೀನೀಗ ನಿಂತಲ್ಲೆ
ನಾನೇನೆ ಅಂದರೂನು ನನಗಿಂತ ಛೂಟಿ ನೀನು
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ... ಕದಿಯುವ ಮುನ್ನವೇ...?
ಪರವಶನಾದೆನೂ ಅರಿಯುವ ಮುನ್ನವೇ... ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ...?
ಹಾ...ನಾ ನ ನಾ
ನಾ....ನಾ..
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೆ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೇ...
ನನ್ನಾ ಕೌತುಕಾ ಒಂದೊಂದೆ ಹೇಳಬೇಕು
ಆಲಿಸುವಾಗ ನೋಡು ನನ್ನನ್ನೆ ಸಾಕು
ಸಹವಾಸ ದೋಷದಿಂದ ಸರಿಹೋಗಬಹುದೆ ನಾನು
ನನಗಾಗಿಯೇ ಕಾದಿಟ್ಟುಕೋ ಹಠವೊಂದನೂ... ಕೆಣಕುವ ಮುನ್ನವೇ...?
ಪರವಶನಾದೆನೂ ಅರಿಯುವ ಮುನ್ನವೇ... ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ...?

ಕಾಲೇಜು ಗೇಟು, ಪರಮಾತ್ಮ (2011)

ಸಂಗೀತ: ಯೋಗರಾಜ್ ಭಟ್ಟ್


ಕಾಲೇಜ್ ಗೇಟ್-ಅಲ್ಲಿ ಫೇಲ್-ಆಗಿ ಬಂದವರ ಕಾಪಾಡೋ.. ಚೊಂಬೆಶ್ವರ... ಆಆ...
ಮಾರ್ಕ್ಸ್ ಕಾರ್ಡಿನಲಿ ಸೊನ್ನೆ.. ರೌಂಡ್-ಆಗಿ ಕಾಣುವುದು.. ಎನ್ ಮಾಡ್ಲಿ.. ಮಾಡ್ಲಿ... ಚೊಂಬೆಶ್ವರ...
ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ....
ಉಸಿರಾಡು ಆಡು ಆಡು ಆಡು ಅಂತಾನೆ....
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ..
ಪಾಸ್ಸ್ ಆಗು ಆಗು ಆಗು ಅಂತಾನೆ..
ಫೇಲ್ ಆಗಾದವರುಂಟೆ ಚೊಂಬೆಶ್ವರ.. ಪಾಸ್-ಆಗಿ ಎನ್ ಮಾಡ್ಲಿ ಒಂದೇ ಸಲ..
ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...
ಒಂದ್ ಒಂದ್ಲಾ ಒಂದು.. ಯೆರ್ಡ್ ಯೆರ್ಡ್ಲಾ ಯೆರ್ಡು.... ಮೂರ್ ಮೂರ್ಲಾ ಮೂರು.. ಬೈ-ಹಾರ್‍ಟು ಮಾಡು..
ಓ ಮೈ ಗೊಡ್ಜೀಲ್ಲಾ.. ವಾಟ್ ಎ ಕ್ಯಾಲ್ಕ್ಯುಲೇಶನ್...
ಹೈಯಷ್ಟು ಮಾರ್ಕ್ಸು ಕೊಟ್ಟೊನೆ ಲೂಸೂ, ಅರ್ಧಕ್ಕೆ ಕೋರ್ಸು ಬಿಟ್ಟೋವ್ನೇ ಬಾಸ್ಸು..
ಮ್ಯೂಸಿಕ್-ಕ್ಕೆ ಸರಿಇಲ್ಲ ಏಳೇ ಸ್ವರ.. ಇನ್ನೆಷ್ತ್ಟು ಕೂಗೋದು ಎಮ್ಮೆ ತರ.. ತರ.. ತರ.. ತರ...
ಟ್ರೈ ಮಾಡು ಏನಾದ್ರೂ ಬ್ಯಾರೆ ತರ.. ಸೈಕಲ್ಲಿನಲಿ ಏರು ತೆಂಗಿನ್-ಮರ.. ಮರ...ಮರ....ಮರ...
ಕೆ ರಾಮ.. ಪೀಯುಸಿಯಲ್ಲ್ ಒಮ್ಮೆ ಡುಮ್ಕಿ.....
ಆಮೇಲೆ ಡೆಗ್ರೀಯಲ್ಲ್ ಮೂರ್ ಮೂರೂ ಬಾಕಿ...
ಎಗ್ಸ್ಯಾಮ್ ಹಾಲಿನಲ್ಲಿ ನನ್ನ ಪರಮಾತ್ಮ..
ಮಾರ್ನಿಂಗೂ ಷೋಗೆ ಹೋಗು ಕಂದ ಅಂತಾನೆ..
ಕ್ಲಾಸ್-ಅಲ್ಲಿ ನಾನು ಓಬ್‌ನೇ ಒಳ್ಳೇ ಪುಣ್ಯಾತ್ಮ..
ಆನ್ಸಾರ್ರು ಶೀಟಿನಲ್ಲೆ ಬರೆದೆ ಕೊಸ್ಚನ್ನೇ
ಸಬ್ಜೆಕ್ಟ್-ಎ ಸರಿ ಇಲ್ಲ ಚೊಂಬೆಶ್ವರ.. ಸಿಲಬಸ್ಸು ಇರ್ಬಾರ್‍ದ ಸಿನಿಮಾ ತರ..
ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...
break free paramathma.. love and karma are just the same..
jai ho paramathma.. rock the world with your holy name...
ಓದ್ಕೊಂಡು.. ಓದ್ಕೊಂಡು.. ಓದ್ಕೊಂಡಿರು ಡೌಟ್-ಇದ್ರೆ ಹುಡ್ಗಿರ್ರ್‌ನ ಕೇಳು ಗುರು...ಗುರು...ಗುರು...ಗುರು...
ಇಲ್ಲಿಂದ ಹೋಗ್ತಾರ ಯಾರಾದರೂ... ಕಾಲೇಜು ಟೆಂಪಲ್ಲು ಇಲ್ಲೇ ಇರು...ಇರು...ಇರು...ಇರು...ಇರು...
ಕಾಲೊಂದು ಭಗವಂತ ಹಾಕಿರುವ ಟೋಪಿ..
ಇಲ್ಲಿಂದ ಪಾಸಾಗಿ ಹೋದವರೇ ಪಾಪಿ..
ದನ ಕಾಯುತಿದ್ದ ಹರಿಕೃಷ್ಣ ಪರಮಾತ್ಮ..
ಕುರುಕ್ಷೇತ್ರ-ದಲ್ಲಿ ಡ್ರೈವರ್-ಆಗಿ ಇರ್ಲಿಲ್ವೆ..
ಅನಿಸಿದ್ದು ಮಾಡುವವನು ಮಾತ್ರ ಪುಣ್ಯಾತ್ಮ..
ಮಾಡೋದು ಏನು ಅಂತ ನಮಗೆ ಗೊತ್ತಿಲ್ವೇ..
ಸಿಸ್ಟೆಮ್ಮೆ.. ಸರಿ ಇಲ್ಲ ಚೊಂಬೆಶ್ವರ.. ಪ್ರೈಮ್ ಮಿನಿಸ್ಟರ್ ಅಗ್ಬಿಡ್ಲ ಒಂದೇ ಸಲ..
ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...
ಕಾಲೇಜು.. ಶಾಶ್ವತ....

ಪರಿಚಯ(2009) - ಕುಡಿನೋಟವೇ ಮನಮೋಹಕ




ಹೆಣ್ಣು : ಕುಡಿನೋಟವೇ.. ಮನಮೋಹಕ.. ಒಡನಾಟವೇ.. ಬಲು ರೋಚಕ..
ಗಂಡು : ಹುಡುಕಾಟವೇ.. ರೋಮಾಂಚಕ.. ಕುಡಿನೋಟವೇ.. ಮನಮೋಹಕ.. ಒಡನಾಟವೇ..
ಹೆಣ್ಣು : ಬಲು ರೋಚಕ..
ಹೆಣ್ಣು : ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ..
ಗಂಡು : ಬೆರಳೆಲ್ಲ ಓಲೆ ಗೀಚಿ.. ಮಸಿಯಾಗಿದೆ.. ಮಸಿಯಾಗಿದೆ..
ಹೆಣ್ಣು : ಕನಸ್ಸೊಂದು ಕುಲುಕುತ ಕೈಯಾ.. ತುಸು ದೂರ ಚಲಿಸಿದೆಯಲ್ಲ..!
ಗಂಡು : ಮನವೀಗ ಮರೆಯುತ ಮೈಯ್ಯ. ಗುರುತನ್ನೇ ಅರಸಿದೆಯೆಲ್ಲ..
ಹೆಣ್ಣು : ನಿನ್ನ ಕಂಡಾಗಲೇ ಜೀವಲೋಕ ..!!
ಗಂಡು : ಕುಡಿನೋಟವೇ.. ಮನಮೋಹಕ.. ಒಡನಾಟವೇ.. ಬಲು ರೋಚಕ..
ಹೆಣ್ಣು : ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ..
ಗಂಡು : ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ..
ಹೆಣ್ಣು : ಮರೆಮಾಚಿ ಕರೆಯಲು ನೀನು.. ಮನಸಾರೆ ಪರವಾಶ ನಾನು..
ಗಂಡು : ನೆನಪಾಗಿ ಸುಳಿಯಲು ನೀನು.. ನವಿರಾದ ಪರಿಮಳ ವೇನು..?
ಹೆಣ್ಣು : ನೀನೆ... ಈ ಜೀವದ ಭಾವಲೋಕ..
ಗಂಡು : ಕುಡಿನೋಟವೇ.. ಮನಮೋಹಕ..
ಹೆಣ್ಣು : ಒಡನಾಟವೇ.. ಬಲು ರೋಚಕ..
ಹೆಣ್ಣು : ಹುಡುಕಾಟವೇ..
ಗಂಡು : ರೋಮಾಂಚಕ..

ಮೊಗ್ಗಿನ ಮನಸು(2008) - ಮಳೆ ಬರುವ ಹಾಗಿದೆ


ಮಳೆ ಬರುವ ಹಾಗಿದೆ...
ಮನವಿಗ ಹಾಡಿದೆ...
ಮಳೆ ಬರುವ ಹಾಗಿದೆ
ಮನವಿಗ ಹಾಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ...
ನಿನ್ನ.. ನಗುವಿನಲ್ಲಿ ನನ್ನ ನಸುಕು
ನಿನ್ನ .. ರೂಪ ಧರಿಸಿ ಬಂದು ನಡಿದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ ...
ಎದೆಯ ಬಾಗಿಲಲ್ಲಿ ನಿನ್ನ ಸುಳಿವು
ಸಣ್ಣ ಆಸೆಯಲ್ಲಿ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣಿಗೆ ಹೊರಟಾಗಿದೆ
ಮರೆತ ಹಾಗೆ ಚೂರು ನಟಿಸಿ ನಿನ್ನ ಕಾಡಬೇಕಿದೆ
ಮಳೆ ಬರುವ ಹಾಗಿದೆ
ಮನವಿಗ ಹಾಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ .....

ಮೊಗ್ಗಿನ ಮನಸು(2008) - ಗೆಳೆಯ ಬೇಕು


ಯಾರಿಗೋ ಏನೇನೋ ನೀಡುವ ದೇವನೇ, ನನ್ನಯ ಮನವಿ ಸಲ್ಲಿಸಲೇನು
ಬೆಚ್ಚನೆ ಭಾವ ಮೂಡಿಸುತಿರುವ ಮನಸಿನ ಆಸೆ ಕೇಳುವೆಯೇನು
ನಾನು ಈಗ ಪ್ರೀತಿಯಲ್ಲಿ ಬೀಳಬೇಕು, ನನಗೂ ಒಬ್ಬ ಗೆಳೆಯ ಬೇಕು
ಇದ್ದಲ್ಲೇ ಇದ್ದ ಹಾಗೆ, ಸದ್ದೇನೆ ಆಗದಂತೆ, ಹೃದಯ ಕದ್ದು ಹೋಗಬೇಕು
ನಾನು ಈಗ ಪ್ರೀತಿಯಲ್ಲಿ...
ನೆನೆದಾಗೆಲ್ಲ ಹಾಗೇನೇ ಓಡಿ ಬರಬೇಕು
ಕಾದಾಗೆಲ್ಲ ಮುತ್ತಿನ ದಂಡ ತೆರಬೇಕು
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ
ಕದ್ದು ಮುಚ್ಚಿ ಓದೋಕೆ ಹೆಚ್ಚೇ ಸಂತೋಷ
ಮುನಿಸು ಬಂದಾಗೆಲ್ಲ ಅವನೇ ಕ್ಷಮಿಸು ಅನಬೇಕು
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು
ಎಲ್ಲಾರು ಜಾತ್ರೆಯಲ್ಲಿ ತೇರನ್ನೇ ನೋಡುವಾಗ, ಅವನು ನನ್ನೇ ನೋಡಬೇಕು
ಕಾಡುವಂಥ ಗೆಳೆಯ ಬೇಕು, ಎಂದು ನನ್ನ ಹಿಂದೆ ಮುಂದೆ ಸುಳಿಯಬೇಕು
ನಾನು ಈಗ ಪ್ರೀತಿಯಲ್ಲಿ..
ಇದ್ದ ಹಾಗೆ ನೀ ನನಗೆ ಚಂದ ಅನಬೇಕು
ಯಾಕೋ ಬೇಜಾರಾದಾಗ ಸುಮ್ಮನಿರಬೇಕು
ಮುದ್ದು ನಗೆಯ ಹೂವನ್ನು ಮುಡಿಸಬರಬೇಕು
ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು
ಮಳೆಯ ತೀರದಲ್ಲಿ ಅವನು ನನಗೆ ಕಾದಂತೆ
ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೇ ನಿಂತಂತೆ
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ ಖಾತೆಯೊಂದ ಜಂಟಿಯಾಗಿ ತೆರೆಯಬೇಕು
ದೇವರಂಥ ಗೆಳೆಯ ಬೇಕು, ಹೇಳದೇನೇ ಅವನಿಗೆಲ್ಲ ತಿಳಿಯಬೇಕು
ನಾನು ಈಗ ಪ್ರೀತಿಯಲ್ಲಿ..

ರಾವಣ(2009) - ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ?


ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ?
ನನ್ನ ಕೊನೆವರೆಗೂ ಮನದಲಿ ನಾನು ಇರಬಹುದೆ?
ವಿಶೇಷವಾಗಿದೆ ಈ ಬಡಪಾಯಿಯ ಖುಶಿಯಾ ಈ ಮಿಡಿತಾ
ನಿನ್ನ ನೋಡುತಾ... ನಾ ಮೂಕ ವಿಸ್ಮಿತಾ
ಮೋಹಗೊಳ್ಳುತಾ... ನಾ ಮೂಕ ವಿಸ್ಮಿತಾ
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ...?
ಭಾವ ಬುದ್ಧಿ ಹಂಚುವಾಗ ಜೀವವೇ ಹೂವು...
ನೀನು ಬಂದು ಹೋದಲೆಲ್ಲಾ ಪ್ರೀತಿಯಾ ಕಾವೂ...
ಕಾಡುವಂತ ಈ ಮೋಹ ದಾಹಗಳ ಹೇಳಲೇ ಬೇಕೇ...?
ಮೂಡಿಬಂದ ಈ ವಿವಿಧ ವೇದನೆಯ ತಾಳಲೇ ಬೇಕೇ...?
ಮಾತನಾಡುತಾ...ನಾನು ಮೂಕ ವಿಸ್ಮಿತಾ
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ...?
ನನ್ನ ಕೊನೆವರೆಗೂ ಮನದಲಿ ನಾನು ಇರಬಹುದೆ...?
ಏಕೊ ಏನೊ ನಿಲ್ಲುತ್ತೇನೆ ಕನ್ನಡಿಯ ಮುಂದೇ...
ಆದರೂನು ಅಲ್ಲಿ ಕೂಡ ನಿನ್ನನೇ ಕಂಡೇ...
ನೂರು ಬಾರಿ ಬರಿದೂ ಹರಿದಿರುವ ಕಾಗದಾ ನಾನು...
ಒಮ್ಮೆ ಬಂದು ಈ ತೆರೆದ ಹೃದಯವನೂ ಒದುವೇ ಏನೂ...?
ಪ್ರೀತಿಮಾಡುತಾ...ನಾನು ಮೂಕ ವಿಸ್ಮಿತಾ
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ?
ನನ್ನ ಕೊನೆವರೆಗೂ ಮನದಲಿ ನಾನು ಇರಬಹುದೆ?
ವಿಶೇಷವಾಗಿದೆ ಈ ಬಡಪಾಯಿಯ ಖುಶಿಯಾ ಈ ಮಿಡಿತಾ
ನಿನ್ನ ನೋಡುತಾ... ನಾ ಮೂಕ ವಿಸ್ಮಿತಾ
ಮೋಹಗೊಳ್ಳುತಾ... ನಾ ಮೂಕ ವಿಸ್ಮಿತಾ

ಲವ್ ಗುರು (2009) - ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ


ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ಯಾವುದು ಕನಸು ಯಾವುದು ನನಸು ನನಗಂತೂ ತಿಳಿದೇ ಇಲ್ಲಾ...
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ ಎಚ್ಚರ ಉಳಿದೆ ಇಲ್ಲಾ...
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ನೂರೆಂಟು ರೀತಿಯ ನೆನಪಿನ ಬಳ್ಳಿ ಮೆಲ್ಲಗೆ ಮೂಡಿದೆ ಎದೆಯಲ್ಲಿ..
ಎಂದೆಂದು ಬಾಡದ ಕನಸಿನ ಹೂವು ನಿನ್ನ ಧ್ಯಾನದಲಿ ಅರಳೀ..
ಕಣ್ಣಲೇ ಮಾತಾಡುತಾ ಸರಿಯಾಗಿ ಹೇಳು ಇದು ಎನು ಅಂತಾ...
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ನಿಂತಲ್ಲಿ ಕೂತಲ್ಲಿ ಸಂತಸದಂತ ಸುಂದರ ಮೋಹಕೆ ಮರುಳಾದೆ...
ಬೇರೇನು ಬೇಕಿಲ್ಲ ನಿನ್ನನು ಕಂಡು ಎಲ್ಲಾ ತಾರೆಗಳಾ ತೊರೆದೇ...
ಮಾತನು ಮರೆಮಾಚುತಾ ಸವಿಯಾದ ಭಾವ ನಿನಗೂನು ಬಂತಾ...
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...
ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...
ಯಾವುದು ಕನಸು ಯಾವುದು ನನಸು ನನಗಂತೂ ತಿಳಿದೇ ಇಲ್ಲಾ...
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ ಎಚ್ಚರ ಉಳಿದೆ ಇಲ್ಲಾ...

ಜೂನಿಯರ್ ದೇವದಾಸ

ಸಾಹಿತ್ಯ : ಯೋಗರಾಜ್ ಭಟ್ಟ್


ಹುಡುಗಿ: ಜೂನಿಯರ್ ದೇವದಾಸ ಅಂದ್ರೆ ಓ ಅಂತಿಯಾ
ಡೈಲಿ ಒಂದು ಹೆಸರಿಡ್ತಿನೀ ಏನಂತೀಯಾ?
ಹುಡುಗ: ಹಳೇ ಹುಡುಗಿ ಕಳ್ಸೊಲ ಮೆಸೇಜು
ಹುಡುಗಿ: ತಗೊತಾಳೆ ಸಿಮ್ ಕಾರ್ಡ್ ಹೊಸದು
ಹುಡುಗ: ಕನಸು ಒಂದು ನೆನಪಿನ ಗರಾಜು
ಹುಡುಗಿ: ನಿನ್ನ ಗೋಳು ತುಂಬಾನೆ ಹಳೇದು
ಎಳೋ ಗುಲ್ಡು ಎಷ್ಟೆ ಅಂದ್ರು ಈ ಲೈಫ಼ು ಇಷ್ಟೆನೇ
ಹುಡುಗ: ಕಷ್ಟ ಸುಖ ಮಾತಾಡೋನ ಬೈಟು ಕಾಫಿ ಹೇಳ್ತೀಯಾ
ಹುಡುಗಿ: ಬೇಡ ಅಂದ್ರು ನಕ್ಕೊಂಡ್ ನಕ್ಕೊಂಡ್ ಅಡ್ಡ ಸಿಕ್ತಾರೆ
ಹೃದಯಯೆಂಬ ಮಂಚೊರಿಲಿ ಕಡ್ಡಿ ಇಡ್ತಾರೆ
ಡೈಲಿ ರಾತ್ರಿ ಎಸ್.ಎಮ್.ಎಸ್ ಲ್ಲಿ ಮುದ್ದು ಮಾಡ್ತಾರೆ
ಆಮೇಲ್ ಬೇರೆಯವರ ಜೊತೆ ಮದುವೆ ಅಂತಾರೆ
ಗ್ಯಾಪಲಿ ನಾವು ಸಿಕ್ಕಿದಕ್ಕೆ ಥ್ಯಾಂಕ್ಸು ಹೇಳ್ತಾರೆ
ಹೋಗಿ ಬಿಡ್ತಾರೆ ಒಮ್ಮೆ ತಿರುಗಿ ನೋಡಿ ಸೀದ ಹೋಗೆ........ ಬಿಡ್ತಾರೆ
ಹುಡುಗಿ: ಸೆಕೆಂಡೆ ಹ್ಯಾಂಡ್ ಗಂಡ್ ಮಕ್ಳದ್ದು ಲೈಫ಼ು ಇಷ್ಟೆನಾ
ಹುಡುಗ: ಡೀಟೇಲಾಗಿ ಮಾತಾಡೋನ ನಾಳೆ ಬೇಗ ಸಿಕ್ತಿಯಾ
ಹುಡುಗಿ: ಜೂನಿಯರ್ ದೇವದಾಸ ಅಂದ್ರೆ ಓ ಅಂತಿಯಾ
ಡೈಲಿ ಒಂದು ಹೆಸರಿಡ್ತಿನೀ ಏನಂತೀಯಾ?
ಹುಡುಗಿ: ಕಂಡ ಕೂಡ್ಲೆ ದೂಸ್ರ ಮಾತೆ ಇಲ್ದೇ ಹಿಂದೆ ಬೀಳ್ತೀರಿ
ಬೇಡ ಅಂದ್ರು ಬೈಕಿನಲ್ಲಿ ಲಿಫ಼್ಟು ಕೊಡ್ತೀರಿ
Facebookನಲ್ಲಿ ಹಲ್ಲು ಕಿರ್ಕೊಂಡು ಜೊಲ್ಲು ಬಿಡ್ತೀರಿ
ಎದುರು ಸಿಕ್ರೆ ಸಾಚ ತರ ಸ್ಮೈಲು ಕೊಡ್ತೀರಿ
ನಮಗೆ ಆಕಳಿಕೆ ಬರೋ ಹಂಗೆ ಲವ್ ಯು ಅಂತೀರಿ
ಹಿಂದೆ ಬರ್ತೀರಿ ಮಂಡಿ ಮೇಲೆ ನಿಂತು ಹೂವು ಕೊಟ್ಟೆ ಬಿಡ್ತೀರಿ
ಹುಡುಗ: ಛೇಂಜು ಆಗೋ ಮಕ್ಕ್ಳೆ ಅಲ್ಲ ನಮ್ಮ ಲೈಫ಼ು ಇಷ್ಟೇಯಾ
ಹುಡುಗಿ: ನಿನ್ನ ಮೂತಿ ಸ್ವಲ್ಪ ನೋಡ ಬೇಕು ಪ್ಲೀಸ್ ಗಡ್ಡ ಬೊಳ್ಸಯ್ಯ

ಶರಪಂಜರ (1971) - ಹದಿನಾಲ್ಕುವರ್ಷ ವನವಾಸದಿಂದ ಮರಳಿ ಬಂದಳು ..

ಸಂಗೀತ: ವಿಜಯಭಾಸ್ಕರ್


ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ ಪ್ರೇಮದ ಆಸರೆ ಒಂದೇ
ಸಾಕೆಂದಳು ಆ ಮಾತೆ.......
ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ ಗುರಿಯಾದಳು ಸೀತೆ
ಅಗ್ನಿಯು ದಹಿಸದೆ ಘೋಷಿಸಿದ ಸೀತೆ ಪುನೀತೆ...ಸೀತೆ ಪುನೀತೆ
ಅಲ್ಪಾಗಸನ ಕಲ್ಪನೆಮಾತಿಗೆ ಅಳುಕಿದ ಶ್ರೀರಾಮ
ಸೀತೆ ಕಲುಷಿತೆ...ಸೀತೆ ದೂಷಿತೆ...ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ ನ್ಯಾಯವಾದಿ ರಾಮಾ....{ಪಲ್ಲವಿ}
ಪೂರ್ಣ ಗರ್ಭಿಣಿ ಪುಣ್ಯರೂಪಿಣಿಯ ಕಂಡನು ವಾಲ್ಮೀಕಿ
ಲೋಕಮಾತೆಗೆ ಶೋಕ ಸಾಗರವೆ ನಿರ್ದಯಿ ರಾಮಾ..ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ
ಸೀತೆಗೆ ಶಾಂತಿನಿಕೇತನ
ಪರಮಪಾವನೇ.. ಪ್ರಾಣವಲ್ಲಭೇ.. ಎನ್ನುತ ರಾಮನ ಆಗಮನಾ
ಸಂಗಮ ಸಮಯದೆ ಭೂಕಂಪನ
ಚಿರವಿರಹವೆ ಜಾನಕಿ ಜೀವನ......{ಪಲ್ಲವಿ}

ಚಂದು (2002) - ಅವಳ ಒಲವ ನಗೆ


ಸಾಹಿತ್ಯ : ನಾಗೇಂದ್ರ ಪ್ರಸಾದ್
ಸಂಗೀತ : ಗುರುಕಿರಣ್



ಅವಳ ಒಲವ ನಗೆ
ಅವಳ ಮೊಗ ಸಿರಿಗೆ
ಅಂದದಾ ಬಿಂದಿಗೆ
ಅವಳ ಒಲವ ನಗೆ
ಅವಳ ಮೊಗ ಸಿರಿಗೆ
ಅಂದದಾ ಬಿಂದಿಗೆ
ಅವಳೊಂದು ಅಮೃತಬಿಂದು
ಬರಿ ಬಿಂಕಾನೆ ಅವಳಾ ಉಡುಗೆ
ಅವಳ ಒಲವ ನಗೆ
ಅವಳ ಮೊಗ ಸಿರಿಗೆ
ಅದೇನೊ ಮಿಂಚು ಆ ಕಣ್ಣಲಿ
ಹೆಜ್ಜೆನ ಹಿಂಡು ಸರದಿಯಲಿ
ಒದ್ದಾಡುತಾವೆ ಆ ತುಟಿಯಲಿ
ಆಸೆಗಳಿಗಾಸೆ ಹರಿಬಿಡುವ ಹಂಸೆ
ತನಗಾರು ಸಾಟಿ ಎಂದು ಎಣಿಸೊ ರತಿ
ಅವಳ ಒಲವ ನಗೆ
ಅವಳ ಮೊಗ ಸಿರಿಗೆ
ಅಂದದಾ ಬಿಂದಿಗೆ
ಹಾಡೊರಿಗಂತು ಅವಳೆ ಧನಿ
ಬರೆಯೊರಿಗಂತು ಭಾರಿ ಗಣಿ
ಆ ಗಣಿಯೆ ನನ್ನೀ ಉಸಿರ ದಣಿ
ಮೊಡಗಳ ಭಾನು ಮಳೆಯಾಗದೇನು
ಹಾಲಂತ ಪ್ರೀತಿ ಎಂದು ಹುಸಿಯಾಗದು
ಅವಳ ಒಲವ ನಗೆ
ಅವಳ ಮೊಗ ಸಿರಿಗೆ
ಅಂದದಾ ಬಿಂದಿಗೆ
ನಡುವೇನು ನಡೆಯುವ ಮೀನು
ಬರಿ ಬಿಂಕಾನೆ ಅವಲ ಉಡುಗೆ

ಹುಚ್ಚ(2001) - ಉಸಿರೇ ಉಸಿರೇ

ಸಾಹಿತ್ಯ : ಪ್ರೇಮ ಕವಿ ಕೆ. ಕಲ್ಯಾಣ್
ಸಂಗೀತ : ರಾಜೇಶ್ ರಾಮನಾಥ್

ಗಂ : ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಕಣ್ಣೀರಲೇ ಬೇಯುತಿದೆ ಮನಸು
ನೋವಲ್ಲಿಯು ಕಾಯುತಿದೆ ಕನಸು
ಉಸಿರಲೇ..ಪ್ರೀತಿಸು..ಈ ಉಸಿರನೆ ಪ್ರೀತಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..
ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಬಾನಿಗೆ ಬಣ್ಣ ಹಚ್ಚೋ ಕಣ್ಣಿನವಳು
ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು
ಹೆ : ನಿನ್ನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
ನೀ ಬಣ್ಣ ಹಚ್ಚೋ ಮುಂಚೆ ಸ್ವಲ್ಪ ಮುಂಚೆ ಸ್ವಲ್ಪ ಹೇಳು
ಗಂ : ಹೋ..ಭೂಮಿಗೆ ಬೇಲಿ ಕಟ್ಟೋ ನಗೆಯವಳು
ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
ಪ್ರೀತಿಸಿದ ಮರುಕ್ಷಣವೇ ಅವಳೇ ನನ್ನುಸಿರು...
ಉಸಿರಲೇ ಜೀವಿಸು.. ನನ್ನುಸಿರನೇ ಸೇವಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..
ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಹಾರುವ ಹಕ್ಕಿಗಳ ಜೋತೆಯವಳು
ರೆಕ್ಕೆಯ ಮೇಲೆ ಕಂದು ಕೂರಿಸಿದಳು
ಹೆ : ನಿನ್ನ್ ಪ್ರೀತಿ ಹಾರೋ ದೂರ ಎಷ್ಟು ಹೇಳು
ನೀ ಹಾರೋವಾಗ ಕಾನಿಸ್ತೀವ ಹೇಳು
ಗಂ : ಹೋ.. ಮೀನಿನ ಹೆಜ್ಜೆ ಮೇಲೆ ನಡೆವವಳು
ಬಂದರು ಬಾರದಿದ್ರು ಹೇಳದವಳು
ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ.....
ಉಸಿರಲೇ.. ಅರಳಿಸು..ನನ್ನುಸಿರನೇ..ಮರಳಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು....
ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಕಣ್ಣೀರಲೇ ಬೇಯುತಿದೆ ಮನಸು
ನೋವಲ್ಲಿಯು ಕಾಯುತಿದೆ ಕನಸು
ಉಸಿರಲೇ ಪ್ರೀತಿಸು ಈ ಉಸಿರನೇ ಪ್ರೀತಿಸು..
ಊಹೂನ್ ಆಹಾನ್ ನನ್ನ ಪ್ರೀತಿಸು.......

ಹುಡುಗರು (2011) - ನೀರಲ್ಲಿ ಸಣ್ಣ ಅಲೆಯೊಂದು ಮೂಡಿ

ಸಂಗೀತ: ವಿ ಹರಿಕೃಷ್ಣ

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ....
ಇಲ್ಲೊಂದು ಚೂರು, ಅಲ್ಲೊಂದು ಚೂರು
ಒಂದಾಗಬೇಕು ಬೇಗ...
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ...
ನಡುವೆಲ್ಲೊ ಮೆಲ್ಲಗೆ ಮಾಯವಾದೆಯ....
ಇದ್ದಲ್ಲೆ ಆಲಿಸಬಲ್ಲೆ ನಿನ್ನೆಲ್ಲಾ ಪಿಸುಮಾತು
ನನ್ನಲ್ಲೆ ನೀನಿರುವಾಗ ಇನ್ನೇಕೆ ರುಜುವಾತು...
ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ‌
ಅಳಿಸಲಾರೆ ನಾನೆಂದು ಮನದ ಗೋಡೆ ಬರಹ...
ಸಹಿಯಾದ ಮೇಲೆ ಸಹಗೀತೆಯೊಂದು ಮರೆಯಾಯಿತೇಕೆ ನೋಡು,
ಇಲ್ಲೊಂದು ಸಾಲು, ಅಲ್ಲೊಂದು ಸಾಲು, ಬೆರೆತಾಗಲೇನೆ ಹಾಡು...
ದಾರೀಲಿ ಹೂಗಿಡವಿಂದು ಕಟ್ಟಿಲ್ಲ ಹೂಮಾಲೆ
ಕಣ್ಣಲ್ಲಿ ಕಣ್ಣಿಡು ನೀನು, ಮತ್ತೆಲ್ಲ ಆಮೇಲೆ...
ಕಾಣಬಲ್ಲೆ ಕನಸಲ್ಲೂ, ನಿನ್ನ ಹೆಜ್ಜೆ ಗುರುತು
ಕೇಳಬೇಡ ಇನ್ನೇನು ನೀನು ನನ್ನ ಕುರಿತು...
ಎದೆಯಾಳದಿಂದ ಮೃದು ಮೌನವೊಂದು ಕರೆವಾಗ ಜಂಟಿಯಾಗಿ,
ಇಲ್ಲೊಂದು ಜೀವ, ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ....

ಹೊಸಬೆಳಕು (1982) - ಚೆಲುವೆಯೆ ನಿನ್ನ ನೋಡಲು

ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್


ಚೆಲುವೆಯೆ ನಿನ್ನ ನೋಡಲು ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು
|| ಚೆಲುವೆಯೆ ||
ಚೆಲುವೆಯೆ ನಿನ್ನ ನೋಡಲು...
ನೀ ನಗುತಿರೆ ಹೂವು ಅರಳುವುದು
ನೀ ನಡೆದರೆ ಲತೆಯು ಬಳುಕುವುದು
ಪ ನಿ ಸ ರಿ ಸ ನಿ ಮ ಪ ನಿ ಸ ನಿ ಧ
ದ ಪ ಮ ಗ ಮ ಪ
ಗ ಮ ಪ ಸ ಗ ಮ ಪ ಸ ಗ ಮ ಪ ಸ
ನೀ ನಗುತಿರೆ ಹೂವು ಅರಳುವುದು
ನೀ ನಡೆದರೆ ಲತೆಯು ಬಳುಕುವುದು
ಪ್ರೇಮ ಗೀತೆ ಹಾಡಿದಾಗ
ಪ್ರೇಮ ಗೀತೆ ಹಾಡಿದಾಗ
ಕೋಗಿಲೆ ಕೂಡ ನಾಚುವುದು
|| ಚೆಲುವೆಯೆ ||
ಚೆಲುವೆಯೆ ನಿನ್ನ ನೋಡಲು...
ಈ ಸಂತಸ ಎಂದು ಹೀಗೆ ಇರಲಿ
ಈ ಸಂಭ್ರಮ ಸುಖವ ತುಂಬುತ ಬರಲಿ
ಪ ನಿ ಸ ರಿ ಸ ನಿ ಮ ಪ ನಿ ಸ ನಿ ಧ
ದ ಪ ಮ ಗ ಮ ಪ
ಗ ಮ ಪ ಸ ಗ ಮ ಪ ಸ ಗ ಮ ಪ ಸ
ಈ ಸಂತಸ ಎಂದು ಹೀಗೆ ಇರಲಿ
ಈ ಸಂಭ್ರಮ ಸುಖವ ತುಂಬುತ ಬರಲಿ
ಇಂದು ಬಂದ ಹೊಸ ವಸಂತ
ಇಂದು ಬಂದ ಹೊಸ ವಸಂತ
ಕನಸುಗಳ ನನಸಾಗಿಸಲಿ
|| ಚೆಲುವೆಯೆ ||
ಚೆಲುವೆಯೆ ನಿನ್ನ ನೋಡಲು...


ಹೊಸಬೆಳಕು (1982) - ತೆರೆದಿದೆ ಮನೆ ಓ ಬಾ ಅತಿಥಿ

ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗರಾವ್

ಆ.....
ತೆರೆದಿದೆ ಮನೆ ಓ ಬಾ ಅತಿಥಿ
ಆ......
ತೆರೆದಿದೆ ಮನೆ ಓ ಬಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
|| ತೆರೆದಿದೆ ||
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ
|| ತೆರೆದಿದೆ ||
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ
|| ತೆರೆದಿದೆ ||
ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ
|| ತೆರೆದಿದೆ ||
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ

ಹೊಸಬೆಳಕು (1982) - ಕಣ್ಣೀರ ಧಾರೆ ಇದೇಕೆ? ಇದೇಕೆ?


ಸಾಹಿತ್ಯ: ಚಿ| ಉದಯಶಂಕರ್
ಸಂಗೀತ: ಎಂ. ರಂಗರಾವ್

ಕಣ್ಣೀರ ಧಾರೆ ಇದೇಕೆ ಇದೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ?
ನನ್ನೊಲವಿನ ಹೂವೆ ಈ ಶೋಕವೇಕೆ ?
ನನ್ನೊಲವಿನ ಹೂವೆ ಈ ಶೋಕವೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ?
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರದ್ವುದೂ ಬರದೆಂದು ನಗುನಗುತ ಬಾಳದೆ
ಬರದ್ವುದೂ ಬರದೆಂದು ನಗುನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ ?
ನಿರಾಸೆ ವಿಷಾದ ಇದೇಕೆ ಇದೇಕೆ ?
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನು ಇಲ್ಲವೇನು
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನು ಇಲ್ಲವೇನು
ನಾ ನಿನ್ನಿಂದ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಾ ನಿನ್ನಿಂದ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಿನ್ನಲ್ಲಿ ನೋವು ಇದೇಕೆ ಇದೇಕೆ ?
ನಿನ್ನಲ್ಲಿ ನೋವು ಇದೇಕೆ ಇದೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ?
ನನ್ನೊಲವಿನ ಹೂವೆ ಈ ಶೋಕವೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ?


ಮನಸಾರೆ - ಕಣ್ಣ ಹನಿಯೊಂದಿಗೆ 

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನು ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ

ಮನದಲಿ ಮಿಂಚಿದೆ ಕುದಿಯುವ ಭಾವ ನದಿಯೊಂದು
ಸುಡುತಿದೆ ವೇದನೆ
ಒಲವಿನ ಕಲ್ಪನೆ ತಂಪನು ಬೀರದೆ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ

ಮಿಡಿತದ ಮುನ್ನುಡಿ ಎದೆಯಲಿ ಗೀಚಿ ನಡೆದರೆ ನೀ 
ಉಳಿಯಲಿ ಹೇಗೆ ನಾ
ಮನದಲಿ ವೇದನೆ ಮೌನದೆ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ

ನಿನ್ನ ದನಿ ಕೇಳಿದೆ ನಿನ್ನ ನಗು ಕಾಡಿದೆ
ಸಣ್ಣ ದನಿಯೊಂದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು 
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಸೋತಿವೆ ಏನು ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ

ವೇದಾಂತಿ ಹೇಳಿದನು - ಮಾನಸ  ಸರೋವರ 

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ
ಕವಿಯೊಬ್ಬ ಕನವರಿಸಿದನು, ಹೂ ಇವಳೆ ಚೆಲುವೆ ಚೆಲುವೆ
ಇವಳ ಜೊತೆಯಲ್ಲಿ ನಾ ಸ್ವರ್ಗವನೇ ಗೆಲ್ಲುವೆ
ನಾ ಸ್ವರ್ಗವನೇ ಗೆಲ್ಲುವೆ

ವೇದಾಂತಿ ಹೇಳಿದನು......

ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು, ಓ ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ ಧನ್ಯ
ನಾನೆಷ್ಟು ಧನ್ಯ ಧನ್ಯ 

ನಾ  ನಗುವ  ಮೊದಲೇನೆ  - ಮನಸಾರೆ 

ನಾ ನಗುವ ಮೊದಲೆನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೆನೆ ತೊದಲುತಿದೆ ಹೃದಯವಿದು ಒಳಗೊಳಗೇ
ನಾ ನಡೆವ ಮೊದಲೆನೆ ಎಳೆಯುತಿದೆ ದಾರಿಯಿದು ನಿನ್ನೆಡೆಗೆ
ನಾ ಅರಿವ ಮೊದಲೆನೆ ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀನನಗೆ?

ತಿಳಿಸದೇ ನನಗೆ ಹುಡುಕಿವೆ ನಿನ್ನ ನನ್ನಯ ಕಣ್ಣು
ಈ ಸಂಕಟ ಸಾಕಾಗಿದೆ ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು
ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀನನಗೆ?

ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ
ನನಗೇತಕೆ ನನ್ನ ಮೇಲೆಯೇ ಈ ಸಂಶಯ
ಬರಿ ಕನಸಿನಲೇ ಆಗುವೆ ಏಕೆ ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೇ ಪ್ರೀತಿಯೆಂದು ನೀನನಗೆ

ನಾ ನಗುವ ಮೊದಲೆನೆ.........

ಎಲ್ಲೋ  ಮಳೆಯಾಗಿದೆ  ಇಂದು  - ಮನಸಾರೆ 

ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ

ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ ನೀ ಬಿಡದೆ ನೋಡಿದರೆ
ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕಂಡರೆ ದೇವರಿಗೂ ಕೋಪವು ಬರಬಹುದೇ

ನೆನಪಿನ ಹೂಗಳ ಬೀಸಣಿಗೆ ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ

ಎಲ್ಲೋ ಮಳೆಯಾಗಿದೆ ಎಂದು ..........